Designed and Maintained By Savinirs.com kannadaaudio.us My Friend's Site Esniper sniping esnips ella kannada abhimanigala vedike intl
     
ಮುಖಪುಟ arrow ಸುದ್ದಿಜಾಲ
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು

Quick Box

Gaalipata dibbana.jpgharatemallarahaasyothsava.jpgmaadusikkadalla

ಧನ ಪ್ರೋತ್ಸಾಹ

Donate-Shreegandha

Dear users,please promote your favorite kannada site shreegandha.org,by donating for all our future plans to get more info,entertainment on our site. donate today.thanks!

Mar 01
2009

Kannada Cini Amrutha Mahotsava [Live-Blog]

Posted by Proxy in Untagged 

proxy
Hear this article

shreegandha.org has taken intiative to provide live coverage of Kannada cini amrutha mahotsava.

users can visit  : http://amruthamahotsava.blogspot.com/

Jan 03
2009

Kannada Calendar 2009

Posted by Proxy in Untagged 

proxy
Hear this article
ಕನ್ನಡ ದಿನದರ್ಶಿ ೨೦೦೯
Download Colorful 12 page Kannada Calendar for 2009 in PDF format
Click the link below:



Also, checkout single page calendar from PrajaVani (Customized) in PDF.



More, checkout single page calendar from VijayaKarnataka (Customized) in PDF.





Nov 29
2008

How to Upload to Different video sites quickly!!!

Posted by Proxy in Untagged 

proxy
Hear this article

steps to convert VCD's and DVD's and uploading it to popular Video sites.

1) try creating an free account at www.tubemogul.com using tubemogul you can uplaod your movie files sized upto 300MB to many popular sites such as google videos,veoh and yahoo.com

2)download alltoavi freeware software or any software which can be used to convert VCD's adn DVD's to avi/DIVX format. url to download the software >> http://downloads.sourceforge.net/alltoavi/AllToAVI_v4_r5394_Setup.exe?modtime=1185303407&big_mirror=0&filesize=26453613

3)Typical conversion steps visit this link >> http://alltoavi.sourceforge.net/tutorial/tutusing.html

4) once the Videos are converted if the video file size exceed 300MB try cutting/splitting them using AVISplitter Download it here >> http://www.zshare.net/download/519852307aa1b002/ and use the option split by parts and then try uploading using the tubemogul.com uploader and then once you are done with upload, you are allowed to select the video image and also select the different video hosting accounts and provide your account info and select promote. you're done. you can refer this video tutorial for your ref.

Oct 22
2008

New Kannada TV Channel [News]

Posted by Proxy in Untagged 

proxy
Hear this article

 

ಕನ್ನಡ ಟಿವಿ ಮಾರುಕಟ್ಟೆಗೆ ಹೊಸ ಹೊಸ ಚಾನಲ್ಲುಗಳು ಸೇರ್ಪಡೆಯಾಗುವುದೆಂಬ ಸುದ್ದಿಗಳು ಆಗಾಗ ಕನ್ನಡನಾಡಿನಲ್ಲಿ ಹರಡುವುದುಂಟು. ಅನೇಕ ಬಾರಿ ಅಂಥ ಸುದ್ದಿಗಳು ಗಾಳಿ ಸುದ್ದಿಗಳಾಗಿ ಸ್ಯಾಟಲೈಟ್ ನೆರವಿಲ್ಲದೆ ಆವಿಯಾಗಿ ಹೋಗುವುದೂ ಉಂಟು. ನಾಲಕ್ಕು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಗಳ ಮನ್ನಾ ದಿನಗಳಲ್ಲಿ ಇಂಥದೊಂದು ಸುದ್ದಿ ದಟ್ಟವಾಗಿತ್ತು. ಕಡೆಯಪಕ್ಷ 12 ನೂತನ ಟಿವಿ ವಾಹಿನಿಗಳು ಕರ್ನಾಟಕಕ್ಕೆ ಲಗ್ಗೆ ಹಾಕುವ ಚಾನ್ಸ್ ಇದೆ ಎಂಬ ಸುದ್ದಿ ಪಸರಿಸಿಕೊಂಡಿತ್ತು. ಆಮೇಲೆ ಏನಾಯಿತು ಎನ್ನುವುದು ನಿಮಗೆಲ್ಲಾ ಗೊತ್ತು.

ಮತ್ತೆ ಈಗ ಅಂಥ ಇನ್ನೊಂದು ಸುದ್ದಿ ಕಳೆದ ಎರಡು ತಿಂಗಳಿನಿಂದ ವಾಹಿನಿ ಮತ್ತು ದೃಶ್ಯ ಮಾಧ್ಯಮ ಕಚೇರಿಗಳ ಮೊಗಸಾಲೆಗಳಿಂದ ಕೇಳಿ ಬರುತ್ತಿದೆ. ಯಾವ ಟಿವಿ ಕಂಪನಿಯೂ ಯಾವುದೇ ಬಗೆಯ ಜಾಹಿರಾತುಗಳನ್ನು ಪ್ರಕಟಿಸದಿದ್ದರೂ ಸಹ ಬಾಯಿಂದ ಬಾಯಿಗೆ ಹೊಸ ಚಾನಲ್ ಸುದ್ದಿ ಹರಡಿ ದಕ್ಷಿಣ ಭಾರತದಲ್ಲೆಲ್ಲ ಗುಲ್ಲಾಗಿದೆ.

ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅಚ್ಚ ಕನ್ನಡದ ಇನ್ನೊಂದು ಟಿವಿ ಚಾನಲ್ ತೆರೆಯಲಿದ್ದಾರೆಂದೂ ಅದಕ್ಕಾಗಿ ಟಿವಿ ತಂಡದ ನೇಮಕಾತಿ ಭರದಿಂದ ಸಾಗಿದೆ ಎಂಬ ಸುದ್ದಿ ಈಗ ಜೋರಾಗಿ ಕೇಳಿ ಬರುತ್ತಿದೆ. ಜೆಡಿಎಸ್ ನಾಯಕರ ಪತ್ನಿ ನಡೆಸುತ್ತಿರುವ ಕಸ್ತೂರಿ ಚಾನಲ್ ಗಿಂತ ಮುಂಚಿತವಾಗಿಯೇ ಜಾರಕಿಹೊಳಿಗೆ ಲೈಸನ್ಸ್ ಸಿಕ್ಕಿತ್ತು. ಕನ್ನಡ ಟಿವಿ ಚಾನಲ್ಲುಗಳಲ್ಲಿ ಪಳಗಿದ ಪತ್ರಕರ್ತ ಹಾಗೂ ತಂತ್ರಜ್ಞರನ್ನು ಮಾತ್ರ ನೇಮಕಾತಿ ಮಾಡಿಕೊಳ್ಳುವ ಇರಾದೆಯನ್ನು ಸಮಯ ಟಿವಿ ಆಡಳಿತ ಮಂಡಳಿ ಹೊಂದಿರುವುದರಿಂದ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಕನ್ನಡ ಟಿವಿ ಸಿಬ್ಬಂದಿ ವರ್ಗದಲ್ಲಿ ಅನೇಕ ಮಂದಿ ಸಮಯ ಸಂಪಾದಕರಿಗೆ ಅರ್ಜಿಗಳನ್ನು ಇ-ಮೇಲ್ This e-mail address is being protected from spam bots, you need JavaScript enabled to view it ಮೂಲಕ ಗುಜರಾಯಿಸಿರುವುದು ದಟ್ಸ್ ಕನ್ನಡ ವಾಹಿನಿಯ ವರದಿಗಾರನ ಗಮನಕ್ಕೆ ಬಂದಿದೆ.

ಹೊಸತನಕ್ಕೆ ತುಡಿಯುವ ಮತ್ತು ಹಾಲಿ ಕೆಲಸದಿಂದ ಬೇಸತ್ತಿರುವ ಕನ್ನಡ ಟಿವಿ ಪತ್ರಕರ್ತರು ಸಮಯ ಟಿವಿಗೆ ಧಾವಿಸಲು ತುದಿಗಾಲಲ್ಲಿ ನಿಂತಿರುವುದಂತೂ ನಿಜ. ಕೆಲವಾರು ಕನ್ನಡ ಟಿವಿಗಳಲ್ಲಿ ಕೊಳೆಯುತ್ತಿರುವ ಬುದ್ದಿವಂತ ಕೆಲಸಗಾರರಿಗೆ ಎರಡು ಮೂರು ವರ್ಷಗಳಾದರೂ ಸಂಬಳ ಸಾರಿಗೆ ಪುನರ್ ವಿಮರ್ಶೆ ಆಗದಿರುವುದು ಬೇರೆ ಟಿವಿಗೆ ಜಂಪ್ ಆಗುವುದಕ್ಕೆ ಕಂಡುಬರುವ ಪ್ರಬಲ ಕಾರಣ. ಜತೆಗೆ ಕೆಲವು ಕನ್ನಡ ಟಿವಿ ಸುದ್ದಿ ಕೋಣೆಗಳಲ್ಲಿ ದುಡಿಯುವ ಪತ್ರಕರ್ತರಿಗೆ ಫ್ರೀಡಂ ಕಡಿಮೆ ಇರುವುದು ಅಷ್ಟೇ ನಿಜ. ಸ್ಥಿತಿ ಹೀಗಿರುವಾಗ ಪಕ್ಕದ ಚಾನಲ್ಲಿಗೆ ಪೈಪೋಟಿ ಕೊಡುವ ಕೆಲಸ ಮಾಡಿ ತೋರಿಸಿ ಸೈ ಎನ್ನಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಟಿವಿ ಚಾನಲ್ಲಿನ ನುರಿತ ಒಬ್ಬ ಉದ್ಯೋಗಿ ದಟ್ಸ್ ಕನ್ನಡಕ್ಕೆ ಮರುಪ್ರಶ್ನೆ ಹಾಕುತ್ತಾರೆ. ಟಿಆರ್ಪಿ ಮನೆ ಹಾಳಾಗಲಿ, ತಮ್ಮ ವೃತ್ತಿ ಜೀವನದ ಟಿಆರ್ ಪಿ ಮೇಲೇಳುವುದು ಯಾವಾಗ ಎನ್ನುವುದೇ ಅವರ ಚಿಂತೆ.

ಸಮಯ ಟಿವಿ ಅಲ್ಲದೆ ರಾಜ್ ಟಿವಿ ಮತ್ತು ಇನ್ನಾವುದೋ ಕಾಮಧೇನು ಎಂಬ ಚಾನಲ್ಲು ಕನ್ನಡದಲ್ಲಿ ಕಣ್ತೆರೆಯುವ ಸುದ್ದಿಯೂ ಗಿರಕಿ ಹೊಡೆಯುತ್ತಿದೆ. ಹೀಗಾಗಿ ಹೊಸ ಚಾನಲ್ಲಿಗೆ ವಲಸೆ ಹೋಗಲು ಪತ್ರಕರ್ತರ ಒಂದು ದೊಡ್ಡ ಪಡೆ ಸಿದ್ಧವಾಗಿ ಕುಳಿತಿದೆ. ಕೇವಲ ಟಿವಿ ಪತ್ರಕರ್ತರಲ್ಲದೆ ಮುದ್ರಣ ಮಾಧ್ಯಮ ಮತ್ತು ಅಂತರ್ ಜಾಲದಲ್ಲಿ ನೌಕರಿ ಮಾಡುತ್ತಿರುವ ಉದ್ಯೋಗಿಗಳೂ ಹೊಸ ಚಾನಲ್ಲು ಹಾಸುವ ಚಾಪೆಗಾಗಿ ಕಾದು ಕುಳಿತಿದ್ದಾರೆ.

ನೌಕರಿ ಬದಲಾಯಿಸುವ ತವಕದಲ್ಲಿರುವವರಲ್ಲಿ ಕನ್ನಡ ನಾಡಿನಿಂದ ಹೊರಗೆ ಉದ್ಯೋಗ ಮಾಡುತ್ತಿರುವ ಕನ್ನಡ ಪತ್ರಕರ್ತರ ಸಂಖ್ಯೆ ಗಣನೀಯವಾಗಿದೆ. ಸಂಬಳ ಸಾರಿಗೆ ಚೆನ್ನಾಗಿದ್ದರೂ ಚೆನ್ನೈ ನಲ್ಲಿ ಬದುಕು ದೂಡುವುದು ಕಷ್ಟ ಎನ್ನುತ್ತಾರೆ ಒಬ್ಬ ಹಿರಿಯ ಪತ್ರಕರ್ತೆ. ಚೆನ್ನೈನ ತಮಿಳು ಬಾಯಿಗಳ ನಡುವೆ ಬದುಕುವುದಕ್ಕಿಂತ 5 ಸಾವಿರ ಸಂಬಳ ಕಡಿಮೆ ಆದರೂ ಬೆಂಗಳೂರಿಗೆ ಹಾರಬೇಕು ಎಂಬ ತವರಿನ ಹಂಬಲ ಅವರದ್ದು. ಇನ್ನು ಆಂಧ್ರಪ್ರದೇಶದಲ್ಲಿ ನೌಕರಿ ಮಾಡುತ್ತಿರುವ ಕೆಂಪು ಮೂತಿಯ ಉದಯೋನ್ಮುಖ ಪತ್ರಕರ್ತರಂತೂ ಕಿಸೆಯಲ್ಲಿ ಬೆಂಗಳೂರಿನ ರೈಲು ಟಿಕೆಟ್ ಇಟ್ಟುಕೊಂಡೇ ತಮ್ಮತಮ್ಮ ಹವಾನಿಯಂತ್ರಿತ ಕಚೇರಿಗಳಿಗೆ ಬಿಸಿಲಲ್ಲೇ ನಿತ್ಯ ನಡೆದು ಹೋಗುತ್ತಿದ್ದಾರೆ.

ಟಿವಿ 9 ಕೂಡ ಹೊಸ ಚಾನಲ್ಲು ತೆರೆಯುತ್ತಿರುವುದು ಬಹುತೇಕ ನಿಶ್ಚಿತ. ಈ ವರ್ಷಾಂತ್ಯದೊಳಗೆ ಆರಂಭಿಸಲಿರುವ ಅದರ ಇಂಗ್ಲಿಷ್ ಚಾನಲ್ಲಿಗೆ ನೇಮಕಾತಿಗಳು ಭರದಿಂದ ಸಾಗಿದೆ. ಇಂಗ್ಲಿಷ್ ಮಾತಾಡಬಲ್ಲ ಎಳೆಯ ತರುಣ ತರುಣಿಯರಿಂದ ತುಂಬಿ ತುಳುಕುತ್ತಿರುವ ಟಿವಿ9 ಬೆಂಗಳೂರು ಕಚೇರಿ ಒಮ್ಮೊಮ್ಮೆ ಕೆಫೆ ಕಾಫಿ ಡೇ ಶಾಪಿನಂತೆ ಕಾಣುತ್ತದೆ. ಇಷ್ಟೆಲ್ಲ ಊಹಾಪೋಹಗಳ ನಡುವೆ ಸಮಯ ಟಿವಿ ಕನ್ನಡ ಅವತರಣಿಕೆ ಆರಂಭವಾಗುತ್ತದೋ ಅಥವಾ ಗಣೇಶ ಹಾಲು ಕುಡಿದ ಸುದ್ದಿಯಂತಾಗುವುದೋ ಎನ್ನುವುದನ್ನು ಅರಿಯಲು ಬ್ರೇಕಿಂಗ್ ನ್ಯೂಸ್ ಅಪ್ ಡೇಟುಗಳಿಗಾಗಿ ಕಾಯಿರಿ ಎಂದು ದಟ್ಸ್ ಕನ್ನಡ ಅಪ್ಪಣೆ ಕೊಡಿಸುತ್ತದೆ!












Sep 11
2008

filesavr.com Offer for Shreegandha.org users

Posted by Proxy in Untagged 

proxy
Hear this article
 

  • FileSavr.com is offering free accounts on to bloggers as well as members of Digg, Stumble, Reddit, Mixx, Del.icio.us.
  • To get your free account fill out the form to receive to get $10 monthly account (250 GB) absolutely free. Accounts created before September 15th will have lifetime membership for free. If you like the service we hope you will help us with small donations via paypal.
  • Offer expires September 15th. WARNING: The service is very slow due to extreme demand right now.


  • Jul 25
    2008

    Kannada Barutha

    Posted by Proxy in Untagged 

    proxy
    Hear this article

    An Email Forward!

    Kannada Barutha??

     

    "Kannada Barutha??", ah! I am sure most of you in Bangalore would have heard this, but what is "kannada barutha?" here it goes. Bangalore the IT capital of India, the silicon city and now a Metro city opened its gates to almost all kinds of people. Very evidently the recent poll census proved that there are only 47% of original inhabitants in Bangalore/bengaluru. The life style of the city has seen a gradual change with Pizza Corners replacing MTR's, classy eat out's replacing "Vidyarthi Bhavans" and flashy pub's replacing all our "Mahalakshmi wine shops".

     

    "Change is inevitable" from the days of BEML, HAL and BHEL to INFOSYS, WIPRO, Geometric ltd; Bangalore has a new look now on the world map. Gone are the days where a typical Sunday for any bangalorean was a nice romantic walk on the pavements of "LALBAGH...", "rave idli and coffee.." at the nearest yet old looking MTR and a wonderful Annavra film either at Santosh or central 'talkies'. Today's Bangalore is deluged in traffic, stress and pressure, Saturday nights without beer is desolate and a Sunday without a visit to either a nearest spa or health clinic is schlocky!! The gandhibazar's are now AC cooled super markets, majestic is now replaced by ultra modern and diversified Brigade road, sri cauvery coffee joint is now Coffee days.. and "Bhagyalakshmi coffee adda.. is now barista. With globalisation and more retail market the city will definitely see more forceful changes.

     

    Have all these changed our language? Kannada the local language of Bangalore is supposed to be one of the most meaningful language, it also has an unique script as compared to its other counterparts; but how many percentage of people really use Kannada in Bangalore now? The figures are staggering, only 37% of people speak kannada in the state's capital, for rest it is only "Kannada barutha?"

     

    Any normal guy starts with this sentence "Kannada barutha?" while talking to other person, people confirm before they speak the language. You want to ask an address in Bangalore? Or reply to a question then English is the most preferred language other than Hindi. It's a famous fact that two kannidagas in an IT company always talk in a neutral language!! even the vendors and shop keepers are channeled with this new wave, the moment when you step in any shop in Bangalore, you are always asked "Kannada barutha?" or the entire conversation takes place in non kannada languages. People have lost the confidence of speaking in the local language and more over speaking Kannada on the streets of "M.G road "or "kormangala" is substandard.

     

    Shopping malls in the city have been completely banned from using Kannada, not a forced one but definitely an adapted one. One has to confirm that the other person knows the language before he starts using any language. "ondu glass beer" is a insult when it comes to any decorous pub in Bangalore.  "Swalpa menu card kodthira..??" has been replaced by "Can I have the menu card pls…?"

     

    Just to hit some facts, marathi is still the largest and common speaking language in mumbai even though mumbai has the highest no of inhabitants. Telgue is a practised ritual in yet another IT HUB Hyderabad. When it comes to tamil nadu, beware you can be alive either if you are a fan of rajnikanth or you know tamil. Malyalam runs in the blood of every mallu be it Kuwait, dubai or any hospital; but when it comes to kannada it is always "kannada barutha?" and next is "namaskara."  

    I am not a Kannada activist neither I run any Kannada supporting organisation, I am just a plebeian who just love the language. Globalisation is the trend and modernisation is the mantra but at the cost the language? Sounds no logic.. is speaking kannada down market? The answer has to be found within oneself. Next time when you hear "kannada barutha?" you just remember that "kannada runs in your blood.."

    Jul 25
    2008

    Bangalore Blast:State Gov Calls Quick Cabinet Meeting

    Posted by Proxy in Untagged 

    proxy
    Hear this article
    ಬೆಂಗಳೂರು, ಜು. 25 : ನಗರದಲ್ಲಿ ನಡೆದ ಸ್ಫೋಟ ಕೃತ್ಯದ ಹಿನ್ನಲೆಯಲ್ಲಿ ಇಂದು 4.30ಕ್ಕೆ ಸಂಪುಟ ತುರ್ತು ಸಂಪುಟ ಸಭೆಯನ್ನು ಕರೆಯಲಾಗಿದೆ. ಸ್ಫೋಟಹಿಂದಿನ ರಹಸ್ಯವನ್ನು ಶೀಘ್ರದಲ್ಲಿ ಬೇಧಿಸುತ್ತೇವೆ ಎಂದು ಸರ್ಕಾರ ಮೂಲಗಳು ತಿಳಿಸಿವೆ.

    ಘಟನೆ ಹಿನ್ನಲೆಯಲ್ಲಿ ತುರ್ತು ಸಂಪುಟ ಸಭೆ

    ನಗರದಲ್ಲಿ ಏಳು ಸ್ಪೋಟಗೊಂಡಿರುವ ಘಟನೆಯನ್ನು ತೀವ್ರವಾಗಿ ಖಂಡಿನೀಯ ಎಂದು ಅಬಕಾರಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು. ಘಟನಾ ಸ್ಥಳಕ್ಕೆ ಭೇಟಿ ನಂತರ ಮಾತನಾಡುತ್ತಿದ್ದ ಅವರು, ಬೆಂಗಳೂರಿನ ಶಾಂತಿಯನ್ನು ಕದಡಲು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು. ಆರೋಪಿಗಳ ಬಂಧನಕ್ಕೆ ಈಗಾಗಲೇ ಆದೇಶಿಸಲಾಗಿದೆ. ಸಂಜೆಯೊಳಗೆ ಪ್ರಾಥಮಿಕ ವರದಿಯನ್ನು ಸರ್ಕಾರ ಅಧಿಕೃತವಾಗಿ ನೀಡಲಿದೆ ಎಂದು ಅವರು ಹೇಳಿದರು.

    ಮಡಿವಾಳ ಚೆಕ್ ಪೋಸ್ಟ್ ಬಳಿ ಸ್ಫೋಟದ ಹಿನ್ನಲೆಯಲ್ಲಿ ಮೃತಪಟ್ಟಿರುವ ಲಕ್ಷ್ಮಿ ಎನ್ನುವ ಮಹಿಳೆಯ ಕುಟುಂಬಕ್ಕೆ 1 ಲಕ್ಷ ರುಪಾಯಿಗಳ ಪರಿಹಾರವನ್ನು ಘೋಷಣೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ತಪ್ಪಿತಸ್ಥರನ್ನು ಕೂಡಲೇ ಬಂಧಿಸುತ್ತೇವೆ ಎಂದು ಹೇಳಿದ ಅವರು ಘಟನೆಯಲ್ಲಿ ಗಾಯಗೊಂಡು ನಗರದ ವಿವಿಧ ಆಸ್ಪತ್ರೆಯ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಭರವಸೆ ನೀಡಿದರು.   ಗಾಯಾಳುಗಳನ್ನು ಸೆಂಟ್ ಜಾನ್ ಆಸ್ಪತ್ರೆ, ಮಲ್ಯ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ

    ಕಳೆದ ಕೆಲ ದಿನಗಳ ಹಿಂದೆ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ನಡೆದ ಭಯೋತ್ಪಾದನೆ ಕೃತ್ಯಗಳಿಗೂ ಇಂದು ಬೆಂಗಳೂರಿನಲ್ಲಿ ನಡೆದ ಸ್ಪೋಟಕ್ಕೆ ಸಂಬಂಧವಿದೆಯಾ ? ಹೌದು ಎನ್ನುತ್ತವೆ ಮೂಲಗಳು. ಈ ಎರಡು ನಗರಗಳಲ್ಲಿ ಬಂಧಿಸಲಾಗಿರುವ ಶಂಕಿತ ಉಗ್ರ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ. ಅಲ್ಲದೇ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಪೊಲೀಸರು ಬಂಧಿಸಿರುವ ವ್ಯಕ್ತಿಗಳಿಗೂ ಸಿಮಿ ಸಂಘಟನೆ ಜತೆ ಸಂಪರ್ಕ ಹೊಂದಿದ್ದಾರೆ ಎಂದು  ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟಗಳಂತೆಯೇ ಬೆಂಗಳೂರಿನ ಸ್ಪೋಟ ನಡೆದಿದೆ ಎನ್ನಲಾಗಿದೆ.

    ಇಂದು ನಡೆದ ಸ್ಪೋಟ ಪ್ರಕರಣದಲ್ಲಿ ಸಿಮಿ ಸಂಘಟನೆ ಮತ್ತು ಲಷ್ಕರ್-ತೊಯ್ಬಾ ಸಂಘಟನೆಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸುಮಾರು 1.20 ರಿಂದ 2.35 ರ ಒಳಗೆ ನಗರದ ವಿವಿಧ ಏಳು ಸ್ಫೋಟಗೊಂಡಿವೆ, ಮೊಬೈಲ್ ಫೋನ್ ಗಳು ಮತ್ತು ಸುಧಾರಿತ ಟೈಮರ್ ಉಪಕರಣವನ್ನು ಸ್ಫೋಟಕ್ಕೆ ಬಳಸಲಾಗಿದೆ. ಕೆಲ ಸ್ಫೋಟಗಳನ್ನು ಸಿಮೆಂಟ್ ತುಂಡುಗಳು, ಜೆಲೆಟಿನ್ ಕಡ್ಡಿಗಳು, ಟೈಮರ್ ಗೆ ಬಳಸುವ ಸಾಧನಗಳು ಘಟನಾ ಸ್ಥಳದಲ್ಲಿ ದೊರಕಿವೆ.

    ಈ ಸ್ಫೋಟಕ್ಕೆ ಉತ್ತಮ ತಯಾರಿ ನಡೆಸಲಾಗಿದೆ ಎನ್ನಲಾಗಿದೆ. ಅನೇಕ ದಿನಗಳ ಪೂರ್ವ ತಯಾರಿ ನಡೆಸಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಘಟನಾ ಸ್ಥಳಕ್ಕೆ ತಜ್ಞರ ತಂಡದ ಪರಿಶೀಲನೆ ಮುಂದುವರೆದಿದೆ.











    Jul 25
    2008

    Bangalore Blast:3 Suspects Arrested

    Posted by Proxy in Untagged 

    proxy
    Hear this article
    ಬೆಂಗಳೂರು, ಜು. 25 : ಸ್ಫೋಟದ ಹಿನ್ನಲೆಯಲ್ಲಿ ನಗರದ ಸುಬ್ರಮಣ್ಯ ನಗರದ ಪೊಲೀಸರು ಮೂವರು ಶಂಕಿತ ಉಗ್ರರನ್ನು ವಶಕ್ಕೆ ತಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ವಿಚಾರಣೆ ಮುಂದುವರೆದಿದ್ದು ಮಹತ್ವದ ವಿಷಯ ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಶಾಂತಿ ಸುವ್ಯವಸ್ಥೆ ಕಾಪಾಡಿ ಯಡಿಯೂರಪ್ಪ

    ನಗರದ ಶಾಂತಿ ಕದಡಲು ವ್ಯವಸ್ಥಿತವಾದ ಪಿತೂರಿ ನಡೆದಿದೆ. ಸಾರ್ವಜನಿಕರು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳು ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

    ಸ್ಫೋಟದ ಹಿನ್ನಲೆಯಲ್ಲಿ ಸಂಪುಟ ಸಭೆ ಕರೆದಿರುವ ಮುಖ್ಯಮಂತ್ರಿಯವರು ಸಭೆಗೆ ಹಾಜರಾಗುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಶಾಂತಿ ಸಮಾಧಾನದಿಂದ ವರ್ತಿಸಿ ಎಂದರು. ಶುಕ್ರವಾರ ನಡೆದಿರುವ ಘಟನೆಯನ್ನು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರ ತುಂಬಾ ಸುತ್ತ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಘಟನಾ ಸ್ಥಳದ ಪರಿಶೀಲನೆಯನ್ನು ತಜ್ಞರು ನಡೆಸಿದ್ದಾರೆ. ಸ್ಫೋಟದ ಹಿಂದಿರುವ ಕೈಗಳನ್ನು ಶೀಘ್ರದಲ್ಲಿ ಬೇಧಿಸಲಾಗುವುದು ಎಂದು ಹೇಳಿದರು.

    ಸಾರ್ವಜನಿಕರು ಭಯಬೀತರಾಗದೆ ಸಂಯಮದಿಂದ ವರ್ತಿಸಿ ಎಂದು ಪುನರುಚ್ಛರಿಸಿದ ಅವರು, ಘಟನೆಯಲ್ಲಿ ಮತಪಟ್ಟಿರುವ ಲಕ್ಷ್ಮಿ ಎಂಬ ಮಹಿಳೆಯ ಕುಟುಂಬಕ್ಕೆ 1 ಲಕ್ಷ ರುಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದರು. ಗಾಯಗೊಂಡು ಮಲ್ಯ ಮತ್ತು ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ವಿಚಾರಣೆಗೆ ಗೃಹ ಸಚಿವ ವಿ.ಎಸ್.ಆಚಾರ್ಯ ತೆರಳಿದ್ದಾರೆ. ಗಾಯಾಳುಗಳ ಆಸ್ಪತ್ರೆಯ ಸಂಪೂರ್ಣ ಖರ್ಚನ್ನು ಸರ್ಕಾರ ಭರಿಸಲಿದೆ ಎಂದು ಯಡಿಯೂರಪ್ಪ ಹೇಳಿದರು. ಸ್ಫೋಟ ನಡೆದ ಸ್ಥಳಕ್ಕೆ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು ತೆರಳಿದ್ದಾರೆ. ಅವರು ಬಂದ ಸ್ಪಷ್ಟ ಚಿತ್ರ ದೊರೆಯಲಿದ್ದು, ಎಲ್ಲ ವಿಚಾರಣೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ರಕ್ಷಣೆ

    ಸ್ಫೋಟದ ಹಿನ್ನೆಲೆಯಲ್ಲಿ ನಗರದ ವಿಧಾನಸಭೆ, ಹೈಕೋರ್ಟ್, ಇಸ್ಕಾನ್, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ಪ್ರಮುಖ ಸರ್ಕಾರಿ ಕಚೇರಿಗಳಿಗೆ ಸೂಕ್ತ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ ಹಾಗೂ ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಿಗೂ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೇಂದ್ರ ನೆರವು

    ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಗರದ ಸ್ಪೋಟ ಘಚನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಬೇಕಿರುವ ಎಲ್ಲ ಸಹಾಯ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಭರವಸೆ ನೀಡಿದ್ದಾರೆ.















    << Start < Prev 1 2 3 4 Next > End >>

    FaceBook Fans